ಶ್ರೀಕ್ಷೇತ್ರ ಇಟಗಿಯ ಶ್ರಾವಣ ಮಾಸದ ಆಮಂತ್ರಣ

ಬಿಳಗಿ ಸೀಮಾ ಆರಾಧ್ಯ ದೈವ ಮಹತೋಬಾರ ಶ್ರೀರಾಮೇಶ್ವರ , ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲದೇವ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ನೆರವೇರುವ ಸಕಲ ಪೂಜಾ ವಿನಿಯೋಗಗಳು ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನೆರವೇರಲಿದ್ದು. ಪ್ರಿಯ ಭಕ್ತಾದಿಗಳಿಗೆ ಈ ಮೂಲಕ ಶ್ರೀದೇವಸ್ಥಾನವು ಆಮಂತ್ರಿಸುತ್ತದೆ. ಪರಾಭವನಾಮ ಸಂ| ಶ್ರಾವಣ ಮಾಸವು ಪಾಡ್ಯ 13-08-2026 ರಿಂದ ಆರಂಭವಾಗುವುದು, ಈ ಶ್ರಾವಣ ಮಾಸದಲ್ಲಿ 4 ಸೋಮವಾರಗಳಿದ್ದು, ಪ್ರತಿ ಸೋಮವಾರದಂದು ಶತರುದ್ರ ಪಾರಾಯಣ ಮತ್ತು ಹವನವು ನೆರವೇರಲಿದ್ದು, ಮಾಸದುದ್ದಕ್ಕೂ ಅರ್ಚನೆ ಮತ್ತು

ಶ್ರೀಕ್ಷೇತ್ರ ಇಟಗಿಯ ಶ್ರಾವಣ ಮಾಸದ ಆಮಂತ್ರಣ Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಸಂಕಲ್ಪಸಿದ್ಧಿ ರಥೋತ್ಸವ

ಬಿಳಗಿ ಸೀಮಾಧೀಶ್ವರ ಇಷ್ಟಿಕಾಪುರ ನಿವಾಸಿ ಮಹತೋಬಾರ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ಅಮವಾಸ್ಯೆಯಲ್ಲೂ ನೆರವೇರುವ ಸಂಕಲ್ಪಸಿದ್ಧಿ ರಥೋತ್ಸವ ಮತ್ತು ಮಹಾಬಲಿ ಪ್ರದಾನವು ನೆರವೇರಿತು. ಪರಾಭವ ಸಂವತ್ಸರದ ನಿಜ ಜ್ಯೇಷ್ಠಮಾಸವಾದ ಇಂದು ತತ್ವಧಿವಾಸ ಹೋಮ, ಶತರುದ್ರ ಪಾರಾಯಣ ಹವನವೂ ಜೊತೆಯಲ್ಲಿ ನೆರವೇರಿತು. ಶ್ರೀ ಉಮೇಶ ಸು ಹೆಗಡೆ ಸಿದ್ದಾಪುರ ಕ್ಷೇಮಾ ಡಿಸ್ಷ್ರಿಬ್ಯೂಟರ್ಸ್‌ ಶ್ರೀದೇವರ ಸಂಕಲ್ಪಸಿದ್ಧಿ ರಥೋತ್ಸವದ ಸೇವಕರ್ತರಾಗಿದ್ದರು. ಹಾಗೂ ಅನುದಿನವೂ ಅಷ್ಟಬಂಧದ ನಂತರ ಮಧ್ಯಾಹ್ನ ಪರ್ಯಾಪ್ತಿ ಅನ್ನಪ್ರಸಾದ

ಶ್ರೀಕ್ಷೇತ್ರ ಇಟಗಿಯಲ್ಲಿ ಸಂಕಲ್ಪಸಿದ್ಧಿ ರಥೋತ್ಸವ Read More »

ಪರ್ಯಾಪ್ತಿ ಅನ್ನಪ್ರಸಾದ ಭೋಜನ ಒಂದು ದಿನದ ಸೇವೆ ರೂ 5001/-

ಬಿಳಗಿ ಸೀಮಾ ಒಡೆಯ ಶ್ರೀರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ನಿತ್ಯ ಮದ್ಯಾಹ್ನ ಅನ್ನಪ್ರಸಾದ ಭೋಜನವು ಶ್ರೀದೇವರ ಅಷ್ಟಬಂಧದ ನಂತರ ನಿರಂತರವಾಗಿ ನೆರವೇರುತ್ತಾ ಬಂದಿರುತ್ತದೆ. ಪರ್ಯಾಪ್ತಿ ಪ್ರಸಾದ ಭೋಜನದ ಒಂದು ದಿನದ ಸೇವೆಯ ಶುಲ್ಕವು ಪರೀಷ್ಕರಣೆಯಾಗಿದ್ದು 5001/- ನಿಗದಿ ಮಾಡಿರಲಾಗಿರುತ್ತದೆ, ಭಕ್ತರು ಸಹಕರಿಸಬೇಕಾಗಿ ವಿನಂತಿ.

ಪರ್ಯಾಪ್ತಿ ಅನ್ನಪ್ರಸಾದ ಭೋಜನ ಒಂದು ದಿನದ ಸೇವೆ ರೂ 5001/- Read More »

ಶ್ರೀಕ್ಷೇತ್ರದಲ್ಲಿ ಎಲ್ಲಾ ಭಕ್ತರ ಸಹಕಾರದೊಂದಿಗೆ ಮಹಾಸ್ಯಂದನೋತ್ಸವವು (ರಥೋತ್ಸವವು) ನೆರವೇರಿತು.

ವಿಶ್ವಾವಸು ಸಂವತ್ಸರ ಪಾಲ್ಗುಣ ಶುದ್ಧ ಏಕಾದಶೀ ದಿನಾಂಕ ೨೭-೦೨-೨೦೨೬ ರಂದು ಮಹಾಸ್ಯಂದನ ( ರಥೋತ್ಸವ) ಉತ್ಸವವು ನೆರವೇರಿತು..ದಿನಾಂಕ ೨೦- ೨-೨೦೨೬ ರಿಂದ ಕಂಕಣ ಬಂಧನ ದಿಂದ ಪ್ರಾರಂಭವಾಗಿ ೨೮-೨-೨೦೨೬ ಪರ್ಯಂತ ಅತೀ ವಿಜೃಂಭಣೆ ಇಂದ ನಿತ್ಯವೂ ಒಂದೊಂದು ಉತ್ಸವ ದಿಂದ ಕೂಡಿ , ಬೀಳಗಿ ಸೀಮೆಯ ಎಲ್ಲ ಸದ್ಭಕ್ತರ ಸಹಕಾರದ ಮೇರೆಗೆ ಈ ಕಾರ್ಯಕ್ರ ಮವು ಸಂಪನ್ನವಾಯಿತುಯಜಮಾನರು – ಚಂದ್ರಶೇಖರ ಮಂಜಯ್ಯ ಹೆಗಡೆತಾಂತ್ರಿಕರು- ಅನಂತ ರಾಮಚಂದ್ರ ಭಟ್ಟ

ಶ್ರೀಕ್ಷೇತ್ರದಲ್ಲಿ ಎಲ್ಲಾ ಭಕ್ತರ ಸಹಕಾರದೊಂದಿಗೆ ಮಹಾಸ್ಯಂದನೋತ್ಸವವು (ರಥೋತ್ಸವವು) ನೆರವೇರಿತು. Read More »

ಇಟಗಿಯಲ್ಲಿ ರಥೋತ್ಸವ ಪ್ರಾರಂಭ

ವಿಶ್ವಾವಸು ಸಂವತ್ಸರದ ವಾರ್ಷಿಕ ಮಹಾರಥೋತ್ಸವದ ಧಾರ್ಮಿಕ‌ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಈ ದಿನ ಫೆಬ್ರವರಿ 20 ಶುಕ್ರವಾರ, ಪ್ರಾರ್ಥನೆ, ಗಣಪತಿ ಪೂಜೆ, ಸಂಕಲ್ಪ, ಕೌತುಕ ಬಂಧನ, ಗಣಹವನ, ಧ್ವಜಾರೋಹಣ ಮತ್ತು ಇನ್ನಿತರ ಕಾರ್ಯಕ್ರಮಗಳು ನಡೆದವು.

ಇಟಗಿಯಲ್ಲಿ ರಥೋತ್ಸವ ಪ್ರಾರಂಭ Read More »

ನೂತನ ಪುಷ್ಪರಥದ ಭೂಸ್ಪರ್ಶ :ಶ್ರೀಕ್ಷೇತ್ರ ಇಟಗಿ

ಮಹಾಶಿವರಾತ್ರಿಯ ಪರ್ವಕಾಲದಲ್ಲಿ ಸಿದ್ದಾಪುರ ತಾಲ್ಲೂಕಿನ ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೆತ್ರ ಇಟಗಿಯಲ್ಲಿ ನೂತನ ಪುಷ್ಪರಥದ ಭೂ ಸ್ಪರ್ಶ ಕಾರ್ಯಕ್ರಮ ಮತ್ತು ಶತರುದ್ರ ಪಾರಾಯಣ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿತು. ಬಹಳ ಹಿಂದಿನ ಕಾಲದ ಪುಷ್ಪರಥವು ಜೀರ್ಣಾವಸ್ತೆಗೆ ತಲುಪಿದ್ದು,2025 ಎಪ್ರಿಲ್ ನಲ್ಲಿ ನಡೆದ ಅಷ್ಟಬಂಧ ಮಹೋತ್ಸವದ ನಂತರದಲ್ಲಿ ನೂತನ ಪುಷ್ಪರಥವನ್ನು ಮಾಡುವ ಸಂಕಲ್ಪವನ್ನು ಆಡಳಿತ ಕಮೀಟಿ ಮಾಡಿತ್ತು.ಅದರಂತಯೇ ವಿಶ್ವಾವಸು ಸಂವತ್ಸರದ ಆರಂಭದಲ್ಲಿ ಮಾಡಿದ್ದ ಸಂಕಲ್ಪದಂತೇ ವಿಶ್ವಾವಸು

ನೂತನ ಪುಷ್ಪರಥದ ಭೂಸ್ಪರ್ಶ :ಶ್ರೀಕ್ಷೇತ್ರ ಇಟಗಿ Read More »

ಶ್ರೀದೇವಸ್ಥಾನಕ್ಕೆ ನೂತನ ಪುಷ್ಪರಥ

ಶ್ರೀಕ್ಷೇತ್ರ ಇಟಗಿಗೆ ನೂತನವಾಗಿ ನಿರ್ಮಿತ ಗಜವಾಹನ ಪುಷ್ಪರಥೋತ್ಸವವು ದಿನಾಂಕ 08-02-2026 ರವಿವಾರ ತಡರಾತ್ರಿ ಬಂದಿರುತ್ತದೆ. ಶ್ರೀದೇವಸ್ಥಾನದ ಪುಷ್ಪರಥ(ಸಣ್ಣ ರಥ) ವು ಕಾಲಾನುಕ್ರಮೇಣ ಜೀರ್ಣವಾಗಿರುದರಿಂದ ಹೊಸದಾಗಿ ರಥವನ್ನು ನಿರ್ಮಿಸುವ ಕಾರ್ಯವನ್ನು ಶ್ರೀದೇವಸ್ಥಾನದ ಮೊಕ್ತೇಸರ ಮಂಡಳಿಯು ಭಕ್ತರ ಸಲಹೆಯೊಂದಿಗೆ ಮುಂದಾಗಿತ್ತು. ಸುಮಾರು 30 ಲಕ್ಷದ ವೆಚ್ಚದಲ್ಲಿ ರಥವನ್ನು ನಿರ್ಮಿಸಿದ್ದು, ಪರಮೇಶ್ವರ ಆಚಾರಿ ಕುಂದಾಪುರ ಇವರ ಸಮ್ಮುಖದಲ್ಲಿ ಸುಂದರವಾದ ರಥವು ಶ್ರೀಕ್ಷೇತ್ರ ಇಟಗಿಗೆ ಬಂದಿಳಿದಿರುತ್ತದೆ.

ಶ್ರೀದೇವಸ್ಥಾನಕ್ಕೆ ನೂತನ ಪುಷ್ಪರಥ Read More »

ಶ್ರೀ ರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ತೇರಿನ ಆಮಂತ್ರಣ

ಬಿಳಗಿನ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ಮಹಾರಥೋತ್ಸವವು ಇದೇ ಬರುವ ಫೆಬ್ರವರಿ 27 ರಂದು ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತಾ. ಸರ್ವರನ್ನೂ ಈ ಮೂಲಕ ಆಮಂತ್ರಿಸುತ್ತಿದ್ದೇವೆ.

ಶ್ರೀ ರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ತೇರಿನ ಆಮಂತ್ರಣ Read More »

ಶ್ರೀಕ್ಷೇತ್ರದ ತೇರಿನ ರಾಯಸ ಆಮಂತ್ರಣ

ಬಿಳಸೀಮಾ ಒಡೆಯ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ವರುಷದಂತೆ ನೆರವೇರುವ ಶ್ರೀ ರಾಮೇಶ್ವರನ ರಥೋತ್ಸವದ ರಾಯಸ ಆಮಂತ್ರಣ.

ಶ್ರೀಕ್ಷೇತ್ರದ ತೇರಿನ ರಾಯಸ ಆಮಂತ್ರಣ Read More »

Scroll to Top