ಶ್ರೀ ಕ್ಷೇತ್ರದಲ್ಲಿ ನಡೆದ ತುಲಾಭಾರ, ಶತರುದ್ರ ಹೋಮ ಸೇವೆ

ದಿನಾಂಕ:13/12/2024 ಶುಕ್ರವಾರ,ರಾಘವೆಂದ್ರ ಶರ್ಮ ತಾಳಗುಪ್ಪ ಇವರು ತಮ್ಮ ಸಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ,ತಾವು ಈ ಹಿಂದೆಯೇ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿಯೇ ಮಾಡಿಸಸುತ್ತೇವೆ ಎಂಬುದಾಗಿ ಸಂಕಲ್ಪ ಮಾಡಿದ ತಮ್ಮ ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೋಸ್ಕರವಾಗಿಶ್ರೀ ದೇವರಿಗೆ ತುಲಾಭಾರ ಸೇವೆ ಮತ್ತು ಶತರುದ್ರ ಹವನವನದ ಸೇವೆಯನ್ನು ಮಾಡಿ ಶ್ರೀ ದೇವರ ಸಂಪೂರ್ಣ ರಕ್ಷೆಯನ್ನು ಪಡೆದರು

ಶ್ರೀ ಕ್ಷೇತ್ರದಲ್ಲಿ ನಡೆದ ತುಲಾಭಾರ, ಶತರುದ್ರ ಹೋಮ ಸೇವೆ Read More »

ವಿದೇಶಿ ಪ್ರವಾಸಿಗರ ಇಟಗಿ ಕ್ಷೇತ್ರ ದರ್ಶನ

ದಿನಾಂಕ 5/12/2024 ಗುರುವಾರದಂದು ಫ್ರಾನ್ಸ್ ನಿಂದ ಬಂದ ಇಬ್ಬರು ವಿದೇಶಿ ಪ್ರವಾಸಿಗರು ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ಇಲ್ಲಿಯ ಶಿಲಾಮಯ ದೇವಸ್ಥಾನ ನೋಡಿ ಅತೀವ ಸಂತೋಷ ಪಟ್ಟರು.ಸಂಪೂರ್ಣವಾಗಿ ಕಲ್ಲಿನಲ್ಲಿಯೇ ದೇವಲಾಯದ ಕೆತ್ತನೇ ಎಷ್ಟೋ ಶತಮಾನಗಳ ಹಿಂದೇ ಮಾಡಲ್ಪಟ್ಟಿತ್ತು ಎಂಬ ವಿಷಯ ಕೇಳಿ ಆಶ್ಚರ್ಯಚಕಿತರಾದರು.ದೇವಾಲಯದಲ್ಲಿನ ಎಲ್ಲ ದೇವರ ದರ್ಶನ ಮಾಡಿ ಭಾರತೀಯ ಶೈಲಿಯಲ್ಲಿಯೇ ನಮಸ್ಕರಿಸಿ,ಪ್ರಸಾದ ಸ್ವೀಕರಿಸಿ ‘ಹರ ಹರ ಮಹಾದೇವ’ ಎಂಬ ನಾಮದ ಉಚ್ಛಾರ ಮಾಡಿ ಇಟಗಿ ಕ್ಷೇತ್ರದ ಜನರ ಗಮನ ಸೆಳೆದರು.

ವಿದೇಶಿ ಪ್ರವಾಸಿಗರ ಇಟಗಿ ಕ್ಷೇತ್ರ ದರ್ಶನ Read More »

ಶ್ರೀ ಕ್ಷೇತ್ರ ಇಟಗಿಯಲ್ಲಿ ಸಂಪನ್ನಗೊಂಡ ಮಹಾದೀಪೋತ್ಸವ

ದಿನಾಂಕ:01/12/2024 ಭಾನುವಾರ,ಕಾರ್ತೀಕ ಮಾಸ ಪರ್ಯಂತರವಾಗಿ ನಡೆದ ನಿತ್ಯ ದೀಪೋತ್ಸವದ ಸಮರ್ಪಣೆ ಮತ್ತು ಮಹಾದೀಪೋತ್ಸವವು ಶ್ರೀ ಕ್ಷೇತ್ರ ಇಟಗಿಯಲ್ಲಿ ನಡೆಯಿತು.ಪ್ರಾತಃ ಕಾಲದಲ್ಲಿ,ಅಧಿವಾಸಹೋಮ,ದೀಪಾಕ್ಯ ಹೋಮ,ಹಾಗೆಯೇ ಮಧ್ಯಾಹ್ನದಲ್ಲಿ ಶತರುದ್ರ ಪಾರಾಯಣ ಮತ್ತು ಅನ್ನಸಂತರ್ಪಣೆ ನಡೆಯಿತು.ಸಾಯಂಕಾಲ,ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಶ್ರೀ ರಂಗಪೂಜೆ ನೆರವೇರಿಸಿ,ಶ್ರೀ ದೇವರ ಎದುರಲ್ಲಿ ಜಗನ್ ಜ್ಯೋತಿಯನ್ನು ಪೂಜಿಸಿ ಬೆಳಗಿಸಲಾಯಿತು.ನಂತರದಲ್ಲಿ ಮಹಾಬಲಿ ಮತ್ತು ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರ ರಜತ ಪಲ್ಲಕ್ಕಿಯ ಉತ್ಸವವು ವಿಜೃಂಭಣೆಯಿಂದ ನಡೆಯಿತು.ನಂತರದಲ್ಲಿ ರಾಜೋಪಚಾರ ಸೇವೆ,ಮಹಾಮಂಗಳಾರತಿ,ಪ್ರಸಾದ ವಿತರಣೆ ಹಾಗೂ ವಿಶೇಷ ಖಾದ್ಯಗಳ ಪನಿವಾರ ವಿತರಣೆಯಾಯಿತು.ಈ ಅಮಾವಾಸ್ಯೆಯ

ಶ್ರೀ ಕ್ಷೇತ್ರ ಇಟಗಿಯಲ್ಲಿ ಸಂಪನ್ನಗೊಂಡ ಮಹಾದೀಪೋತ್ಸವ Read More »

ಶ್ರೀ ಕ್ಷೇತ್ರದಲ್ಲಿ ಮೃತ್ಯುಂಜಯಹೋಮ ಮತ್ತು ಜಪ.

ದಿನಾಂಕ 28/11/2024 ಗುರುವಾರ,ಶ್ರೀ ಕ್ಷೇತ್ರದಲ್ಲಿ ಮಾರುತಿ ಮಡಿವಾಳ ಬೈಲಳ್ಳಿ ಮತ್ತು ಕುಟುಂಬದವರು ,ತಮ್ಮ ಕುಟುಂಬದ ಅನಾರೋಗ್ಯ ಭಾದೆ ನಿವಾರಣೆಗೋಸ್ಕರವಾಗಿ, ಎಲ್ಲ ವಿಧವಾದ ಕಷ್ಟಗಳ ಪರಿಹಾರದ ಸಲುವಾಗಿ ಮತ್ತು ಅರೋಗ್ಯ ವೃದ್ಧಿಗೋಸ್ಕರ ಶ್ರೀ ದೇವರ ಸನ್ನಿಧಾನದಲ್ಲಿ ಮಹಾ ಮೃತ್ಯುಂಜಯ ಜಪ ಮತ್ತು ಹೋಮವನ್ನು ದೇವಸ್ಥಾನದ ತಾಂತ್ರಿಕರಾದ ಅನಂತ ಭಟ್ ಇಟಗಿ ಇವರ ಮಾರ್ಗದರ್ಶನದಲ್ಲಿ ನೆರವೇರಿಸಿದರು, ಹಾಗೆಯೇ ಉತ್ತರೋತ್ತರ ಅಭಿವೃದ್ಧಿಯ ಪ್ರಾರ್ಥನೆ ಮಾಡಿ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ ಮತ್ತು ಸರ್ವಾಲಂಕಾರ ಸೇವೆಯನ್ನು ನೇರವೇರಿಸಿ ಪ್ರಸಾದ ಭೋಜನ ವಿನಿಯೋಗಿಸಿ,ಪುನೀತರಾದರು

ಶ್ರೀ ಕ್ಷೇತ್ರದಲ್ಲಿ ಮೃತ್ಯುಂಜಯಹೋಮ ಮತ್ತು ಜಪ. Read More »

ಇಟಗಿಯಲ್ಲಿ ಮಹಾ ದೀಪೋತ್ಸವ

ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಾನದಲ್ಲಿ ದಿನಾಂಕ 01/12/2024 ಭಾನುವಾರದಂದು ಮಹಾದೀಪೋತ್ಸವ ನಡೆಯಲಿದೆ. ಕಾರ್ತೀಕ ಮಾಸ ಪರ್ಯಂತ‌ ನಡೆದ ನಿತ್ಯ ದೀಪೋತ್ಸವದ ಸಮರ್ಪಣೆಯು,ಸಹಸ್ರ ದೀಪೋತ್ಸವ ಮತ್ತು ಜಗನ್ ಜ್ಯೋತಿ‌ಪೂಜೆಯ ಮೂಲಕ ನೆರವೇರಲಿದೆ.ಅದೇ ದಿನ ಬೆಳಿಗ್ಗೆ ಅಧಿವಾಸ ಹೋಮ,ದೀಪಾಕ್ಯ ಹೋಮ ಮತ್ತು ಮಧ್ಯಾಹ್ನ ಶತರುದ್ರ ಪಾರಯಣ ಮತ್ತು ಅನ್ನಸಂತರ್ಪಣೆ ನಡೆಯಲಿದೆ.ಹಾಗೆಯೇ ಸಾಯಂಕಾಲ 7 ಗಂಟೆಯಿಂದ ಶ್ರೀ ರಂಗಪೂಜೆ,ಮಹಾಬಲಿ,ರಜತ ಪಲ್ಲಕ್ಕಿ ಉತ್ಸವ,ಜಗನ್ ಜ್ಯೋತಿ ಪೂಜೆ ಮತ್ತು ಸಹಸ್ರ ದೀಪೋತ್ಸವದೊಂದಿಗೆ ಮಹಾ ದೀಪೋತ್ಸವ ಸಮರ್ಪಣೆ ನಡೆಯಲಿದೆ ಎಂದು

ಇಟಗಿಯಲ್ಲಿ ಮಹಾ ದೀಪೋತ್ಸವ Read More »

ತುಲಾಭಾರ ಸೇವೆ

ದಿನಾಂಕ 21 ನವೆಂಬರ್,ಶ್ರೀ ಕ್ಷೇತ್ರದಲ್ಲಿ ಅಶ್ವತ್ಥ ಗಣಪತಿ ಭಟ್ ಕಲ್ಮನೆ, ಇವರು ಸಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ರಾಮೇಶ್ವರನ ಸನ್ನಿಧಾನದಲ್ಲಿ ತಮ್ಮ ಉದ್ಯೋಗದ ಸಮೃದ್ಧಿಗೋಸ್ಕರ ಪ್ರಾರ್ಥಿಸಿಕೊಂಡಿದ್ದ ಅಕ್ಕಿ ಮತ್ತು ಕಾಯಿಯ ತುಲಾಭಾರ ಸೇವೆಯನ್ನು ಸಮರ್ಪಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.ಶ್ರೀ ದೇವಸ್ಥಾನದ ತಾಂತ್ರಿಕರಾದಂತಹ,ವೇ. ಮೂ. ಲಕ್ಷ್ಮೀನಾರಾಯಣ ಭಟ್ಟರು ಮತ್ತು ವೇ. ಮೂ. ಅನಂತ ಭಟ್ಟರ ಮಾರ್ಗದರ್ಶನದಲ್ಲಿ ಈ ಸೇವೆಯು ಶ್ರೀ ದೇವರ ಪದತಲಕ್ಕೆ ಅರ್ಪಣೆ ಆಯಿತು.

ತುಲಾಭಾರ ಸೇವೆ Read More »

ನೂತನ‌ ವೆಬ್‌ಸೈಟ್ (ಜಾಲತಾಣ)ಅನಾವರಣ ಕಾರ್ಯಕ್ರಮ

ಬಿಳಗಿ‌ ಸೀಮಾ ಮಹತೋಬಾರ ಶ್ರೀ‌ ರಾಮೇಶ್ವರ ಶ್ರೀ‌ ಅಮ್ಮನವರು ಮತ್ತು ಶ್ರೀ ವಿಠ್ಠಲ ದೇವಸ್ಥಾನದ ನೂತನ‌ ವೆಬ್‌ಸೈಟ್ (ಜಾಲತಾಣ)ಅನಾವರಣ ಕಾರ್ಯಕ್ರಮ ದಿನಾಂಕ 14-11-24ರಂದು‌ ನೆಡೆಯಿತು. ಅಂಚೆ‌ ಇಲಾಖೆಯ‌ ಶಿರಸಿ ವಿಭಾಗಿಯ ಅಧಿಕಾರಿ ಹೂವಪ್ಪಾಜಿ ಅನಾವರಣ ಮಾಡಿದರು.ಜನ ಸಂಪರ್ಕ ಸಾಧಿಸುವಲ್ಲಿ ಜಾಲತಾಣಗಳ ಪಾತ್ರ ಪ್ರಮೂಖವಾಗಿದೆ.ಇಂದಿನ ತಂತ್ರಜ್ಞಾನವು‌ ತುಂಬಾ‌ ಮುಂದುವರೆದಿದ್ದು ಇದರ ಉಪಯೋಗವನ್ನು ದಿನನಿತ್ಯದ ವ್ಯವಹಾರದಲ್ಲಿ ಪಡೆಯುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲು ಜನರ ಮಧ್ಯೆ ಸಂಪರ್ಕ ಸಾಧಿಸಲು ಕಾರಣವಾಗಿದೆ. ಇದರ ಉಪಯೋಗವು ಎಲ್ಲಾ ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ ಎಂದರು. ಶ್ರೀ‌ ದೇವಸ್ಥಾನದ ಅರ್ಚಕರು

ನೂತನ‌ ವೆಬ್‌ಸೈಟ್ (ಜಾಲತಾಣ)ಅನಾವರಣ ಕಾರ್ಯಕ್ರಮ Read More »

ಅಷ್ಟಬಂಧ ಮಹೋತ್ಸವದ ಸಮೀತಿ ರಚನೆ ಹಾಗೂ ಮನವಿ ಪತ್ರ ಅನಾವರಣ

4 ಎಪ್ರಿಲ್ 2025 ರಂದು ಶ್ರೀ ಕ್ಷೆತ್ರದಲ್ಲಿ ನಡೆಯುವ ಅಷ್ಟಬಂಧ ಮಹೋತ್ಸವದ ಸಮೀತಿ ರಚಿಸಿ, ಮನವಿ ಪತ್ರವನ್ನು ಅನಾವರಣ ಮಾಡಲಾಯಿತು. ಅಷ್ಟಬಂಧ ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಶಶಿಭೂಷಣ ಹೆಗಡೆ, ಕಾರ್ಯಾಧ್ಯಕ್ಷರಾಗಿ ಚಂದ್ರಶೇಖರ ಹೆಗಡೆ ಕೊಡ್ತಗಣಿ, ಗೌರವ ಕಾರ್ಯದರ್ಶಿಯಾಗಿ ಮೂರ್ತಿ ಹೆಗಡೆ ಹರಗಿ.ಕಾರ್ಯದರ್ಶಿಯಾಗಿ ವಿನಾಯಕ ಹೊನ್ನೆಮಡಿಕೆಯವರ ಹೆಸರುಗಳನ್ನು ಘೋಷಿಸಲಾಯಿತು.ಈ ಸಂದರ್ಭದಲ್ಲಿ, ಆರ್.ಎಸ್. ಹೆಗಡೆ ಹರಗಿ, ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಡನೆ, ಶ್ರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತ ಭಟ್ಟ ಹೊನ್ನಮ್ಮ ದೇವಸ್ಥಾನ,ನಾಟ್ಯ ವಿನಾಯಕ ದೇವಾಲಯದ ಪ್ರಧಾನ

ಅಷ್ಟಬಂಧ ಮಹೋತ್ಸವದ ಸಮೀತಿ ರಚನೆ ಹಾಗೂ ಮನವಿ ಪತ್ರ ಅನಾವರಣ Read More »

Scroll to Top