Nani GB

ಐ.ಏ.ಎಸ್ ಪದವಿಧರರಿಗೆ ಸನ್ಮಾನ

ಶ್ರೀ ಕ್ಷೇತ್ರ ಇಟಗಿಯಲ್ಲಿ,IAS ಪರೀಕ್ಷೆಯಲ್ಲಿ ದೇಶದಲ್ಲೇ 288ನೇ ರಾಂಕ್ ಪಡೆದು ತೇರ್ಗಡೆ ಹೊಂದಿದ ವಿಕಾಸ್ ಅವರಿಗೆ ಮೊಕ್ತೇಸರ ಮಂಡಳಿಯವರಿಂದ ಗೌರವ ಸಮ್ಮಾನ ಕಾರ್ಯಕ್ರಮ ನೆರವೇರಿತು.ಮಂಗಳವಾರ ಸಂಜೆ 6 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಆಡಳಿತ ಮೋಕ್ತೆಸರರಾದ ಚಂದ್ರಶೇಖರ ಹೆಗಡೆ ಕೊಡ್ತಗಣಿ ಅಧ್ಯಕ್ಷತೆ ವಹಿಸಿದ್ದರು.ಪ್ರಸ್ತವಿಕ ನುಡಿಯನ್ನು ಆಡಿದ ಅವರು,“ಎಲ್ಲಾ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿದ್ದ ವಿಕಾಸ್ ಪ್ರತಿಷ್ಠಿತ IAS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಕ್ಷಣವನ್ನು ನಾವೆಲ್ಲರೂ ಕೂಡಿ ಸಂಭ್ರಮಿಸಲೇ ಬೇಕು.” ಎಂದರು. ಉಪಸ್ಥಿತರಿದ್ದು ಮಾತನಾಡಿದ ನಾರಾಯಣಮೂರ್ತಿ ಹೆಗಡೆ ಹರಗಿ […]

ಐ.ಏ.ಎಸ್ ಪದವಿಧರರಿಗೆ ಸನ್ಮಾನ Read More »

ಸೀಮೆಯ ಜನರು ಬೆವರು ಕೇಳಿದರೆ ರಕ್ತ ನೀಡಿದ್ದಾರೆ- ಡಾ.ಶಶಿಭೂಷಣ್ ಹೆಗಡೆ

ದಿನಾಂಕ:27/04/2025 ಭಾನುವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ದಿವ್ಯಾಷ್ಟಬಂಧ ಮಹೋತ್ಸವದ ಅಭಿವಂದನಾ ಸಭೆಯನ್ನು ಏರ್ಪಡಿಸಲಾಗಿತ್ತು. ಶಂಖನಾದದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ನಾರಾಯಣಮೂರ್ತಿ ಹೆಗಡೆ ಹರಗಿ ಅವರುಆಗಮಿಸಿದ ಸರ್ವರಿಗೂ ಸ್ವಾಗತವನ್ನು ಕೋರಿದರು. ಆಡಳಿತ‌ ಮೊಕ್ತೇಸರರಾದ ಚಂದ್ರಶೇಖರ ಹೆಗಡೆಯವರು,“ನಮ್ಮ ಇಟಗಿಯ ಅಷ್ಟಬಂಧ ಮಹೋತ್ಸವವು ನ ಭೂತೋ ನಭವಿಷ್ಯತಿ ಎನ್ನುವ ಮಾತಿನಂತೇ ಇತಿಹಾಸ ಸೃಷ್ಟಿಸುವಂತಾಗಿದೆ.ಪ್ರತಿ ಹಂತದಲ್ಲೂ ಶ್ರೀ ರಾಮೇಶ್ವರನು ಪ್ರಸಾದವನ್ನು ಅನುಗ್ರಹಿಸಿ ಕಾರ್ಯಕ್ರಮದ ಯಶಸ್ಸಿನ ಸಂದೇಶವನ್ನು ನಮಗೆ ನೀಡಿದ್ದಾನೆ” ಎಂದು ಭಾವುಕರಾಗಿ ತಮ್ಮ ಪ್ರಾಸ್ತಾವಿಕ ನುಡಿಯನ್ನು ಪ್ರಸ್ತಾಪಿಸಿದರು. ಅಷ್ಟಬಂಧ ಸಮಿತಿಯ ಕಾರ್ಯದರ್ಶಿಯಾದ ವಿನಾಯಕ‌ ಹೆಗಡೆ ಹೊನ್ನೆಮಡಿಕೆ

ಸೀಮೆಯ ಜನರು ಬೆವರು ಕೇಳಿದರೆ ರಕ್ತ ನೀಡಿದ್ದಾರೆ- ಡಾ.ಶಶಿಭೂಷಣ್ ಹೆಗಡೆ Read More »

ಶ್ರೀ ಕ್ಷೇತ್ರ ಇಟಗಿಯಲ್ಲಿ ದಿವ್ಯಾಷ್ಟಬಂಧ ಮಹಾಸ್ಯಂದನೋತ್ಸವ

ಇಟಗಿ : ಶ್ರೀ ಕ್ಷೇತ್ರ ಇಟಗಿಯ ದಿವ್ಯಾಷ್ಟಬಂಧ, ಬ್ರಹ್ಮಕಲಶಭಾಗವಾಗಿ ಶುಕ್ರವಾರ ಮಹಾಸ್ಯಂದನ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.ಶ್ರೀಸಂಸ್ಥಾನ-ಗೋಕರ್ಣ, ಶ್ರೀರಾಮಚಂದ್ರಾಪುರಮಠ ದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹಾಗೂ ಹಾಸನದ ಶ್ರೀ ಸಮರ್ಥ ರಾಮಾವಧೂತರು ಮಧ್ಯಾಹ್ನ ಎರಡರ ಹೊತ್ತಿಗೆ ರಥದಲ್ಲಿ ಉತ್ಸವ ಮೂರ್ತಿಗೆ ಮಂಗಳಾರತಿ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಿದರು.ಸರ್ವವಾದ್ಯಗಳ ಅಬ್ಬರ, ಭಕ್ತರ ಹರ್ಶೋದ್ಗಾರದಲ್ಲಿ ರಥ ಬೀದಿಯಲ್ಲಿ ಸಾಲಂಕೃತ ರಥವನ್ನುಬೆಳೆದರು. ಭಕ್ತರು ಬಾಳೆಹಣ್ಣು, ಮಂಡಕ್ಕಿ ಚೆಲ್ಲಿ ಹರಕೆ ತೀರಿಸಿದರು.ಈ ಸಂದರ್ಭದಲ್ಲಿ ಅಷ್ಟಬಂಧ ಸಮಿತಿ ಗೌರವಾಧ್ಯಕ್ಷ ಶಶಿ ಭೂಷಣ ಹೆಗಡೆ,

ಶ್ರೀ ಕ್ಷೇತ್ರ ಇಟಗಿಯಲ್ಲಿ ದಿವ್ಯಾಷ್ಟಬಂಧ ಮಹಾಸ್ಯಂದನೋತ್ಸವ Read More »

ಶ್ರೀ ಕ್ಷೇತ್ರ ಇಟಗಿಯಲ್ಲಿ ನಿತ್ಯ ಪ್ರಸಾದ ಭೋಜನ,”ಪರ್ಯಾಪ್ತಿ”

ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ನಿತ್ಯ ಪ್ರಸಾದ ಭೋಜನವನ್ನು ಉಣಬಡಿಸುವ ಸದುದ್ಧೇಶದಿಂದಖಾಯಂ ಪ್ರಸಾದ ಭೋಜನ ವ್ಯವಸ್ಥೆಯನ್ನು ಇಂದಿನಿಂದ ಶ್ರೀರಾಮೇಶ್ವರ ದೇವಸ್ಥಾನ ಇಟಗಿಯಲ್ಲಿ ಆರಂಭಿಸಲಾಯಿತು. ಇಂತಹ ಒಂದು ಮಹತ್ಕಾರ್ಯಕ್ಕೆ ಒಂದು ಹೆಸರನ್ನು ಕರುಣಿಸಬೇಕೆಂದು ಶ್ರೀಸಂಸ್ಥಾನದವರಲ್ಲಿ ಭಿನ್ನವಿಸಿಕೊಂಡಾಗ ಪರ್ಯಾಪ್ತಿ ಎಂಬ ಅದ್ಭುತ ಹೆಸರನ್ನು ಅನುಗ್ರಹಿಸಿದ್ದಾರೆ. ಪರ್ಯಾಪ್ತಿ ಭೋಜನ ಶಾಲೆಯಲ್ಲಿ ಇಂದಿನಿಂದ ಆರಂಭವಾದ ಪ್ರಸಾದ ಭೋಜನದಲ್ಲಿ80 ಶಿವಭಕ್ತರು ಪ್ರಸಾದ ಭೋಜನವನ್ನು ಸ್ವೀಕರಿಸಿದರು. ಭದ್ರಂ ಶುಭಂ ಮಂಗಳಂ

ಶ್ರೀ ಕ್ಷೇತ್ರ ಇಟಗಿಯಲ್ಲಿ ನಿತ್ಯ ಪ್ರಸಾದ ಭೋಜನ,”ಪರ್ಯಾಪ್ತಿ” Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರೀನಿವಾಸ ಹೆಬ್ಬಾರ್

ಶಿರಸಿಯ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ್ ಹೆಬ್ಬಾರ್ ಅವರು ಶ್ರೀಕ್ಷೇತ್ರ ಇಟಗಿಯ ಅಷ್ಟಬಂಧ ಮಹೋತ್ಸವಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ ಪಡೆದರು.ಹಾಗೆಯೇ ಹಾಸನದ ಶ್ರೀ ರಾಮಾವಧೂತರ ಆಶೀರ್ವಾದ ಪಡೆದರು. ಹಾಗೆಯೇ ಇಟಗಿಯಲ್ಲಿ ನಡೆಯುವ ಈ ವಿಜೃಂಭಣೆಯ ಕಾರ್ಯಕ್ರಮಕ್ಕೆ ಬೇಕಾಗುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಅವರೇ ಮಾಡಿದ್ದಾರೆ. ಅದಕ್ಕೆ ಬೇಕಾಗುವ ಟ್ಯಾಂಕ್ ,ಟ್ಯಾಂಕರ್ ಗಾಡಿ ಎಲ್ಲ‌ ವ್ಯವಸ್ಥೆಯನ್ನು ತಮ್ಮ ಸಂಸ್ಥೆಯಿಂದಲೇ ಪೂರೈಸಿರುವುದು ಸಂತಸದ ವಿಷಯ. ಅವರಿಗೆ ಶ್ರೀ ರಾಮಾವಧೂತರ ಅಮೃತ ಹಸ್ತದಿಂದ ಮಂತ್ರಾಕ್ಷತೆ ದೊರಕಿತು.ಇವೆಲ್ಲ ಕ್ಷಣಗಳನ್ನು ಆನಂದಿಸಿದ ಅವರು

ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರೀನಿವಾಸ ಹೆಬ್ಬಾರ್ Read More »

ಇಟಗಿ ಕ್ಷೇತ್ರ ನಮ್ಮ ಜಿಲ್ಲೆಯ ಹೆಮ್ಮೆಯ ಕ್ಷೇತ್ರ : ಕಾಗೇರಿ

ತ್ರಿಕಾಲ ಬಲಿ ಉತ್ಸವ ನಡೆಯುವ ಶ್ರೀ ಕ್ಷೇತ್ರ ಇಟಗಿಯು ನಮ್ಮ ಜಿಲ್ಲೆಯ ಹೆಮ್ಮೆಯ ಕ್ಷೇತ್ರವಾಗಿದೆ. ಇಲ್ಲಿನ ಇತಿಹಾಸ ಮತ್ತು ಧಾರ್ಮಿಕ ಆಚರಣೆಗಳು ಬಹಳ ಮಹತ್ವದ್ದಾಗಿದೆ, ಎಂದು ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಳಿದರು.ಶ್ರೀಯುತರು ಎಪ್ರಿಲ್ 5 ರಂದು ಸಿದ್ದಾಪುರ ತಾಲ್ಲೂಕಿನ ಬಿಳಗಿ ಸೀಮೆಯ ಶ್ರೀಕ್ಷೇತ್ರ ಇಟಗಿಯಲ್ಲಿ ನಡೆಯುತ್ತಿರುವ ದಿವ್ಯಾಷ್ಟಬಂಧ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ರಾಮೇಶ್ವರ ಮತ್ತು ಅಮ್ಮನವರ ದರ್ಶನ ಮಾಡಿಕೊಂಡು,ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರೀ ದೇವಸ್ಥಾನದ ಪಾತ್ರ ಎನ್ನುವ ಶಿಲಾಫಲಕದ ಅನಾವರಣ ಮಾಡಿದರು. ಭಾರತದ

ಇಟಗಿ ಕ್ಷೇತ್ರ ನಮ್ಮ ಜಿಲ್ಲೆಯ ಹೆಮ್ಮೆಯ ಕ್ಷೇತ್ರ : ಕಾಗೇರಿ Read More »

ಇಟಗಿ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಸಂಪನ್ನ

ಸಿದ್ದಾಪುರ: ಪುರಾಣ ಪ್ರಸಿದ್ದ ಇಟಗಿ ಶ್ರೀ ಮಹತೋಬಾರ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯ ಭಕ್ತಿ ಭಾವದಿಂದ ಸಂಪನ್ನ ಗೊಂಡಿದೆ‌.ಅಷ್ಟಬಂಧದ ಸಾನಿಧ್ಯ ವಹಿಸಿದ್ದ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅನುಗ್ರಹ ಸಂದೇಶ ನೀಡಿ, ದೇವಸ್ಥಾನಗಳು ಸಾಕಷ್ಟಿವೆ.ಆದರೆ ಶಾಸ್ತ್ರೀಯವಾದ ದೇವಾಲಯಗಳು ವಿರಳ. ಇಟಗಿಯ ಶ್ರೀ ರಾಮೇಶ್ವರ ದೇವಾಲಯ ವಾಸ್ತುಶಾಸ್ತ್ರ, ಆಗಮೋಕ್ತವಾದ ಎಲ್ಲಾ ವ್ಯವಸ್ಥೆಗಳನ್ನು ಇಟ್ಟುಕೊಂಡ ಒಂದು ದೇವತಾ ಸನ್ನಿಧಿ. ಬಿಳಗಿ ಸೀಮೆಯ ದೇವಾಲಯ ಇದು. ಚೈತನ್ಯದ ಕಳೆ ತುಂಬಿರುವ ಪವಿತ್ರ ತಾಣ ಎಂದರು.ಅದ್ಯಾವದೋ ಕಾರಣಕ್ಕೆ ಕಳೆದ ಸುಮಾರು

ಇಟಗಿ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಸಂಪನ್ನ Read More »

ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಅತಿಥಿಗಳು

ಶ್ರೀಕ್ಷೇತ್ರ ಇಟಗಿಯ ಅಷ್ಟಬಂಧೋತ್ಸವದ ಪ್ರಯುಕ್ತ ಪ್ರತಿ ನಿತ್ಯವೂ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ,ಅಷ್ಟಬಂಧ ಕಮೀಟಿಯ ಸದಸ್ಯರು ಮತ್ತು ಅತಿಥಿಗಳು ದೀಪ ಬೆಳಗಿಸುವ ಮೂಲಕ ನಡೆಸಿಕೊಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಅತಿಥಿಗಳು Read More »

ಶ್ರೀ ಕ್ಷೇತ್ರದಲ್ಲಿ ಶಿವ ಪಂಚಾಕ್ಷರಿ ಜಪಹೋಮ ಸಂಪನ್ನ.

ಶ್ರೀ ಕ್ಷೇತ್ರ ಇಟಗಿಯಲ್ಲಿ ಜರುಗಲಿರುವ ದಿವ್ಯಾಷ್ಟಬಂಧ ಮಹೋತ್ಸವದ ಪೂರ್ವದಲ್ಲಿ ಶ್ರೀ ದೇವಸ್ಥಾನದ ಅರ್ಚಕರು ಮತ್ತು ಭಕ್ತರೆಲ್ಲರೂ ಸೇರಿ ಮಾಡಿದ್ದ ಶಿವ ಪಂಚಾಕ್ಷರಿ ಜಪವು ಹೋಮದೊಂದಿಗೆ ಸಂಪನ್ನಗೊಂಡಿತು.ದಿನಾಂಕ:28/03/2025 ಶನಿವಾರ ಬೆಳಿಗ್ಗೆ 11 ಗಂಟೆಗೆ ,ಜಪದಲ್ಲಿ ಪಾಲ್ಗೊಂಡ ಎಲ್ಲ ಭಕ್ತರ ಸಮ್ಮುಖದಲ್ಲಿ ಶಿವಪಂಚಾಕ್ಷರಿ ಜಪಹೋಮವು ರಾಮೇಶ್ವರನ ಪದತಲಗಳಿಗೆ ಅರ್ಪಣೆ ಆಯಿತು.

ಶ್ರೀ ಕ್ಷೇತ್ರದಲ್ಲಿ ಶಿವ ಪಂಚಾಕ್ಷರಿ ಜಪಹೋಮ ಸಂಪನ್ನ. Read More »

ಶ್ರೀ ದೇವಸ್ಥಾನದದಲ್ಲಿ ಅಮವಾಸ್ಯೇ ಶತರುದ್ರ ಪಾರಾಯಣ

ದಿನಾಂಕ:29/03/2025 ಶನಿವಾರದಂದು ಶ್ರೀ ಕ್ಷೇತ್ರ ಇಟಗಿಯಲ್ಲಿ ತ್ರಿದೇವತಾ ಪೂಜೆಯಲ್ಲಿ ಒಂದಾದ ಅಮವಾಸ್ಯೆಯ ಶತರುದ್ರ ಪಾರಾಯಣ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಸಂಪನ್ನಗೊಂಡಿತು.

ಶ್ರೀ ದೇವಸ್ಥಾನದದಲ್ಲಿ ಅಮವಾಸ್ಯೇ ಶತರುದ್ರ ಪಾರಾಯಣ Read More »

Scroll to Top